ಒಮ್ಮೆ ಮೂಡಣದಿ ಹಕ್ಕಿಗಳ ಸ್ವಾಗತ
ಇನ್ನೊಮ್ಮೆ ಪಡುವಣದಿ, ಗೂಡು ಸೇರುವ ಸಂತಸದಿ ವಂದನಾರ್ಪಣೆಯ
ಭಾಷಣ
ಯುಗಯುಗಗಳಿಂದ ಸಾಗಿದೆ ನಿನ್ನ ನಿರಂತರ ಓಡಾಟ
ಸಕಲ ಜೀವರಾಶಿಗಳೋಡನೆ ಮತ್ತೆ ನಿನ್ನ ಒಡನಾಟ
ಕಿರಣಗಳ ಕೈ ಚಾಚಿ ಸಾಲ ನೀಡಿರುವೆ ಗಿಡ-ಮರ ಹೂ
ಬಳ್ಳಿಗಳಿಗೆ
ಬೆಳಗಿನ ಜಾವದ ನಿದ್ದೆಗಣ್ಣಲ್ಲಿ
ನಿನ್ನ ಮದ್ಯಾಹ್ನದ ಉತ್ಸಾಹದಲ್ಲಿ...
ಒಮ್ಮೆ ಮೂಡಣದ ಮೋಡದ ಸೆರಗಿನ ಮುಂದೆ
ಒಮ್ಮೆ ಪಡುವಣದಿ ಮೋಡದ ಸೆರಗಿನ ಹಿಂದೆ....
ನಾಳೆ ಸಿಗುವ ಭಾಷೆ ಕೊಟ್ಟು
ಮತ್ತೆ ದುಡಿವ ಪಣವ ತೊಟ್ಟು
ನಿನ್ನೆ ಭಾಷೆ ಕೊಟ್ಟು ಬಂದ ನಾಡಿನೆಡೆಗೆ ನೋಟ
ನೆಟ್ಟು
ಕಡಲಾಚೆ ಬಾನದಿ, ಕಡು ನೀಲಿ ಬಾನದಿ
ಅದೋ ಮುಳುಗುತಿಹ ‘ಕೆಂಪು ಚಂದಿರ’
ಮತ್ತೆ ಬರುವ ಸಂಭ್ರಮದಿ
ಮತ್ತೆ ಬರುವ ಸಂಭ್ರಮದಿ....
*ಕೆಂಪು ಚಂದಿರ= ಸೂರ್ಯ
No comments:
Post a Comment