ಪ್ರಣಯದ ಮೋಜಿಗೆ
ಛೇಡಿಸಿದರೆ
ಅದೆಂಥಾ ಮುನಿಸು
ನಿನ್ನದು?
ಮುನಿಸು ಮರೆಸಲು
ರಮಿಸಿದರೆ
ಜೋಕೆ ಎಂದಿತು ಮನವು
ಅಪಾಯ ಹತ್ತಿರವಿದೆ ಎಂದು....
ಅಂದು ನಿನ್ನ ಕೆಣಕಿದ್ದರ
ಫಲವೇ
ಇಂದು ನಾ ಮೈ ಮರೆತಿರುವೆ
ಎಂದೂ ಭೇಟಿಯಾಗದ
ಭಾವನೆಗಳು
ಇಂದು ಕೆರಳಿ ನಿಂತಿವೆ
ನನ್ನ ಭಾವನೆಗಳು
ನಿನ್ನೊಡಗೂಡಿ
ಸಂಭಾಷಣೆಯಾದವು ಅಂದು
ಅವೇ ಸಂಭಾಷಣೆ ಮೈ
ನೆರೆದು
ಋತು ಕಾವ್ಯವಾಗಿದೆ ಇಂದು
ಭಾವಾವೇಶಕ್ಕೊಳಗಾಗಿ
ಛೇಡಿಸಿದೆ
ಮೋಜು ಸಿಕ್ಕಿತು,
ಮುನಿಸು ಉಚಿತವಾಗಿ...
ಭಾವ ಸಮುದ್ರದಲಿ ಮೈ
ಮರೆತು ರಮಿಸಿದೆ
ಮುನಿಸು ಮುಳುಗಿತು
ಸೂರ್ಯನೊಡಗೂಡಿ, ಪ್ರಣಯ ಸಿಕ್ಕಿತು ನಿನ್ನೊಡಗೂಡಿ...
No comments:
Post a Comment