ಭಾವವರಿಯದಾದೆಯಾ ಓ ಗಿಳಿಯೇ ?
ಭಾವ ಮನದೊಳುಕ್ಕಿಸಿ ಹಾರ ಹೊರಟೆ ಎಲ್ಲಿಗೆ ?
ಭಾವ ಶೃಂಗಾರವಾದಿತೆಂಬ ಭಯವೇ ?
ನಿನ್ನ ಹಾಡಿಗೆ ನನ್ನ ಮೈ ಮೇಲೆ
ಹೊಸ ರೆಕ್ಕೆ ಪುಕ್ಕಗಳ ಸಂಭ್ರಮ
ಉಸಿರು ನಿಲ್ಲುವ ಹಾಗೆ ನಿನ್ನ ಹೆಸರು ಹೇಳಲೇ ?
ನೀ ಹಾರದ ಹಾಗೆ ಜೋರಾಗಿ
ಉಸಿರೆಳೆದು ನಿರ್ವಾತ ಸೃಷ್ಟಿಸಲೇ ?
ಹಿತವಾಗಿ ರೆಕ್ಕೆಯೊಂದಾಗಿಸಿ ನೆನೆಯಬಾರದೆ? ನೀ ಕುಣಿಯಬಾರದೆ?
ನನ್ನ ಒಂಟಿ ಗೂಡಿನ ಅತಿಥಿ ನೀ ಆಗಬಾರದೇ ?
ಚಳಿಗೆ ನಡಗುವ ಹಾಡುಗಳ ಸಾಲಿಗೆ ಒಣಗಿದ ಗೂಡಿನ ಕಸಕಡ್ಡಿಗಳು ಚಿಗುರಿವೆ
ಹಸಿವಾಗಿರಬಹುದು ಸಿಹಿ ಗೆಣಸು ಹೆಕ್ಕಿ ತಂದು ತಿನಿಸಲೇ ?
ಪಂಜರಗಳು ಕಾಯುತಿಹವು ಸೆರೆ ಹಿಡಿಯಲು ನಮ್ಮನು
ನನ್ನ ಕೊನೆಯ ಆಸೆ ನಿನ್ನ ಜೊತೆ ಒಂದೇ ಪಂಜರದ ವಾಸ
ಬಹುಷ: ಆವಾಗ್ಲಾದ್ರೂ ನನ್ನ
ಅನಿವಾರ್ಯತೆ ನಿನಗೆ ಅರ್ಥ ಆಗ್ಬಹುದು...!
No comments:
Post a Comment