ಹುಲ್ಲಿನೆಸಳಿನ
ಇಬ್ಬನಿಯಂತೆ ಕಂಡಾಗಿನಿಂದಲೂ ನೀ ಕಂಡಾಗಿನಿಂದಲೂ
ನಿನ್ನದೆ ಬಿಂಬ ನನ್ನ
ಮನದ ತುಂಬ
ನಿನ್ನ ಕುಡಿ ನೋಟವೇ
ನನ್ನ ಕಣ್ಣ ತುಂಬ,
ನೀ ದಾಟಿ ಹೋದ ಹಾದಿಲಿ
ಈಗ ಹೂ ಬಳ್ಳಿಗಳ ಮುಷ್ಕರ...!
ಮತ್ತೆ ನೀ ಬಾರದಿರಲು
ನಿನ್ನ ಹೆಸರಿನ ಬಹಿಷ್ಕಾರ, ನಿನ್ನ ಹೆಸರಿನ ಬಹಿಷ್ಕಾರ...
ನಿನ್ನ ಗುಂಜನದ
ಪ್ರತಿದ್ವನಿಯಲ್ಲಿ ಹಕ್ಕಿಗಳ ಕಲರವ ಮಂಕು-ಮಂಕು,
ನಿನ್ನದೇ ಹೆಸರಿನ
ಜಪದಲ್ಲಿ ಆ ‘ಸೂರ್ಯ’ನ ಕಾಂತಿಯೂ ಮಂಕು-ಮಂಕು ಮಂಕು-ಮಂಕು...
ಕೈ ಬೀಸಿ ನೀ ನನ್ನ
ಕರೆದಾಗಿನಿಂದಲೂ ನೀ ಕರೆದಾಗಿನಿಂದಲೂ
ನನ್ನ ಭಾವನೆಗಳಿಗೆ
ಭಾಷೆಯು ಬಾರದೆ,
ನನ್ನ
ಪಂಚೆಂದ್ರಿಯಗಳನ್ನೆಲ್ಲ ಆವರಿಸಿರುವೆ,
ಅದಕೆ ‘ನಾನು’ ಎಂಬ
ಸಾಮ್ರಾಜ್ಯಕ್ಕೆ ‘ನೀನು’ ಎಂಬ ಕಿಚ್ಚನ್ನು ಹಚ್ಚು ಬಾ ಈಗಲೇ,
ಪಂಚೆಂದ್ರಿಯಗಳ ಸಮ್ಮೇಳನ
ನಡೆಸೋಣ ಬಾ ನಾವಿಗಲೇ,
ನನ್ನ ಕಿರು ಬೆರಳಿಗೆ
ನಿನ್ನ ಕಿರು ಬೆರಳ ಬೆಸುಗೆ
ಬೆಸೆಯೋಣ ಬಾ ನಾವಿಗಲೇ
ಬೆಸೆಯೋಣ ಬಾ ನಾವಿಗಲೇ
ಬೆಸೆಯೋಣ ಬಾ
ನಾವಿಗಲೇ....