Total Pageviews

Tuesday 10 November 2015

ಪ್ರೇಮದ ತಂಗಾಳಿ

ಚೈತ್ರ ಮಾಸದ ಕಗ್ಗತ್ತಲೋಡಿಸಲು
ಪೂರ್ಣಿಮೆಯು ತಂದ ಬೆಳದಿಂಗಳು ನೀ
ತಂಗಾಳಿ ಬೀಸಿ ಮನದ ಮೌನ ಕಲುಕಿರುವೆ,
ನಿನ್ನ ಸೆರಗು ಮುಖದ ಮೇಲೆ ಹಾರಿ
ಬೆಳದಿಂಗಳ ರಾತ್ರಿಯಲಿ ಮನವೆಲ್ಲಾ ಗುಲ್ಲೆದ್ದು
ತಂಗಾಳಿ ಸಂತೆಯಲಿ ಸುಡು ಸುಡು ಅನುಭವ...

ಸುಯ್ಯ್-ಸುಯ್ಯ್ ಎಂದು ಬೀಸುವ ತಂಗಾಳಿಯಲಿ
ನೀ ಏನೋ ಪಿಸುಗುಟ್ಟಿದೆ
ಅರ್ಧಂಬರ್ಧ ಶಬ್ದಗಳು ಹೊರಬಂದು
ನಿಂತು...ನಾಚಿ...ನಕ್ಕವು...ನುಲಿದವು...
ನೀ ಮೈ ಸೋಕಿ ನಿಂತೆ...ಮಾತುಗಳು ಹೊರಡದೆ
ನನ್ನ ಮನದ ನೈದಿಲೆ ಸಂಭ್ರಮದಿ ಅರಳಿದೆ...

ಮನದೊಳಿರುವ ಅವ್ಯಾಹತ ಪ್ರೀತಿಯನು
ಯಾವ ಪರಿ ನಾ ಬಿಡಿ ಹೇಳಲಿ
ಅಂಗಳದೊಳಿರುವ ಮಲ್ಲಿಗೆ ಮಂಟಪದಡಿ
ಬೆಳ್ಳಿ ಮುಗಿಲಿಗೆ ಮುಖ ಮಾಡಿ
ಇಬ್ಬನಿಯ ಹಾಸಿಗೆಗೆ ಮೈಯೊಡ್ಡಲು
ತಂಗಾಳಿಗೆ ಕಿಚ್ಚು ಹಚ್ಚುವ ಬಂಢತನ ತೋರಿಬಿಡಲೇ?

ಬಾಳ ಪ್ರೇಮದ ಪ್ರಣಯಕೆ
ಬಳ್ಳಿಗಳ ಸಂಧಿಯಿಂದ ಇಣುಕಿ ನೋಡುತಿಹ ಚಂದ್ರಮನ ರುಜುವಾತು
ಸರಸ ವಿರಸಗಳ ಅದ್ಧೂರಿ ಚಿತ್ರಣಕೆ
ನೀ ಬಣ್ಣ ತುಂಬುವ ನಿರೀಕ್ಷೆಯಲ್ಲಿ...