ನಿನ್ನಾಗಮನ,
ಹುಣ್ಣಿಮೆಯ ಬೆಳದಿಂಗಳಲ್ಲೂ ಮೋಡಗಳಿಲ್ಲದೆ ತುಂತುರು ಸುರಿದಂತಾಯಿತು
ಭುವಿ ಕೆಸರಾಗದೆ ನಿನ್ನ ಹೆಜ್ಜೆ ಮೂಡಿದಂತಾಯಿತು
ಸಾಗರ ದಡದಲ್ಲಿ ತೆರೆ-ತೀರ ನಿಂತು ಹರಟಿದಂತಾಯಿತು
ಸೂರ್ಯ ಪ್ರಕಾಶನಾಗದೆ ಹೂವೇ ಜೇನುಗೂಡಿನಲ್ಲರಳಿದಂತಾಯಿತು
ಜೇನು ಹೂವಿನಲ್ಲಿ ಗೂಡುಕಟ್ಟಿದಂತಾಯಿತು
ಇದ ಕಂಡ ಕಾಮಣ್ಣನಿಗೂ ಮಂಪರು ಬಂದಂತಾಯಿತು
ನಿನ್ನಾದೇಶಕ್ಕೆ,
ಹುಣ್ಣಿಮೆಯೂ ಕರಗಬೇಕೆ
ಬೆಳದಿಂಗಳ ರಾತ್ರಿಯಲ್ಲೂ ಬಿಸಿಲ ಹಬೆಯಾಡಬೇಕೆ
ಮೂಡಿದ ಹೆಜ್ಜೆ ಪಾದುಕೆಗಳಾಗಬೇಕೆ
ಈಗಿರುವ ತುಂಬು ಸಂಸಾರದಿಂದ ಹೂವುಜೇನು – ಜೇನುಹೂವೆಂಬ ಹೊಸ ಅನ್ವರ್ಥಗಳು
ಹುಟ್ಟಬೇಕೆ
ತೆರೆ ತೀರದ ಆಳ, ತೀರ ತೆರೆಯ ಆಳವನ್ನು ಸಂಧಿಸಿ ಅರ್ಥೈಸಬೇಕೆ, ಅರ್ಥೈಸಿ ಮತ್ತೆ
ಸಂಧಿಸಬೇಕೆ
ಅಬ್ಬಾ!! ಇನ್ಮುಂದೆ ಶೃಂಗಾರವನ್ನರಸಿ ನಿನ್ನ ಪೂಜೆಯೂ ಆಗಬೇಕೆ ?
No comments:
Post a Comment