ತುಳುಕಿಸು ನಿನ್ನ ನಯನದಿಂದ ನಶೆಯೇರಿಸುವ ಪಾನ
ಈಜು ಬಂದರೂ ಮುಳುಗುವ ಬಯಕೆ ಹುಟ್ಟಿಸೋ ನಿನ್ನ ಮತ್ತಿನ ಪಾನ
ಮುಳುಗಿ ದಡ ಸೇರಿದರೂ ಮತ್ತೆ ಜಿಗಿಯುವ ಹಠ ನನ್ನಲ್ಲಿ
ನಿನ್ನ ನಶೆಯೇರಿಸುವ ಪಾನ ಬತ್ತುವವರೆಗೂ ನನ್ನ ಉತ್ಸಾಹ ಕಡಿಮೆಯಾಗದಿಲ್ಲಿ
ಓ ಮುಗ್ಧ ಮುದ್ದು ಕೊಲೆಗಾರಳೆ
ಏಕೆ ಕೊಲ್ಲುತಿರುವೆ ಈ ಪರಿ
ನಿನ್ನಂತರಂಗ ಮೀಟಲು ನನಗವಕಾಶ ಬೇಕಿದೆ ಒಂದು ಸಾರಿ
ಕೊಡುವುದಾದರೆ ಹೇಳು ಎನಗೆ ಸರಿ
ನನ್ನ ಜರಿಯದೆ ನನ್ನತ್ತ ಜರಿ
ಹರಿಸುವೆ ನಾ ಪ್ರೇಮದ ಝರಿ
ಆದರೆ ಸುಮ್ಮನೆ ಮೋಜಿಗೂ ನೋಡಬೇಡ ನನ್ನತ್ತ ನೀ ಕೊಲ್ಲುವ ಪರಿ
ಈ ಕೆಂಬಣ್ಣ ಯಾವಾಗ ನನ್ನ ಕೈಬಿಡುವುದೆಂದು ನನಗರಿಯದು
ಅದು ನನ್ನ ಕೈಬಿಡುವುದರೊಳಗೆ ನೀ ಹಿಡಿದರೆ ಒಳ್ಳೆಯದು
ಇಲ್ಲವಾದರೆ ಕೆಂಪು ಪಾನ – ಕಣ್ಣ ಬಾಣಗಳ ಚಕ್ರವ್ಯೂಹ ಕೊಲ್ಲದೆ ನನ್ನನ್ನು
ಸುಮ್ಮನಿರದು.....!
*ಕೆಂಬಣ್ಣ = ಸಾರಾಯಿ
No comments:
Post a Comment