ಓ
ಹೂವೇ ಮುನಿಸೇಕೆ
ಇಷ್ಟು ದೂರ ಉಚಿತವೇ?
ಬಳಸು ಬಾ ನನ್ನನು
ಇಷ್ಟು ವಿರಹ ಸಾಲದೇ?
ಮೌನದ ದೀಪ ಹಚ್ಚಿರುವೆ ನನ್ನ ಸುತ್ತ ಮುತ್ತ
ನಾನೆಷ್ಟು ಜೋರಾಗಿ ಕೂಗಿದೆ ನಿನ್ನ ಹೆಸರು ಆದರೂ
ಮೌನದ ಪ್ರತಿಧ್ವನಿಯೇ ನನ್ನ ಸುತ್ತ
ನನ್ನೊಳಿರುವ ನಿನ್ನನು ಮಾತಾಡಿಸಿದರೂ ಮೌನದ್ದೇ
ಮಾತು
ಈ ಮೌನದ ಕಾರಬಾರು ಸಂತೆ ನನಗಂತೂ ಸಾಕು
ದೇವರೇ ಕಸಿಮಾಡಿದ ಜೋಡಿ ನಮ್ಮದು
ಭಿಕಾರಿ ಪ್ರೇಮಿಯಾದೆ ನಿನ್ನ ವ್ಯಾಮೋಹದಲ್ಲಿಂದು
ಪ್ರೀತಿಯ ಪಟ್ಟಾಭಿಷೇಕ ಮಾಡು ಬಾ ನನಗೆ ನೀನಿಂದು
ನಾನೇ ದೊರೆಯಾಗುವಾಸೆ ನಿನ್ನ ಹೃದಯ
ಸಾಮ್ರಾಜ್ಯಕ್ಕೆಂದೆಂದು
ಒಲವಿದ್ದರೂ ಏಕೆ ಈ ಕಣ್ಣಾಮುಚ್ಚಾಲೆ
ಪ್ರಣಯದ ಸಾಂತ್ವನ ಹೇಳು ಬಾ ಈಗಲೇ
ತುಟಿಗಳ ಸಂಧಿಯಲ್ಲಿ ಬಚ್ಚಿಟ್ಟ ಮೂರು ಮಾತನು
ಹೇಳಿಬಿಡು ನಿಂತಲ್ಲೆ
ನೀನೆ, ಬರೀ ನೀನೆ ತುಂಬಿರುವೆ ನನ್ನ ಹಾಡಿನ
ಶೀರ್ಷಿಕೆ-ಭಾವಾರ್ಥದಲ್ಲೆ.....
No comments:
Post a Comment