ನೀನು ನನಗೆ ದೇವರು ಕೊಟ್ಟ ಉತ್ಪ್ರೇಕ್ಷಿತ ವರವಾದಂತಾಗಿದೆ
ಮಾಮರವೆಲ್ಲೊ ಕೋಗಿಲೆ ಅಲ್ಲಿರುವ ಬದಲಾಗಿ ಕೋಗಿಲೆ ಇರುವಲ್ಲಿಗೆ ಮಾಮರ ಬಂದಂತಾಗಿದೆ
ನಿನ್ನ ಸೃಷ್ಠಿ ಅವನಿಗೂ ದಿಗ್ಭ್ರಾಂತಿ ಮೂಡಿಸಿದೆ
ಕೊಟ್ಟ ವರವ ಹಿಂಪಡೆಯಲಾರದೆ ಅತ್ತು ಹೊರಳಾಡಿದಂತಿದೆ
ನಿನ್ನ ಹುಳಿಗೆನ್ನೆ ರುಚಿಸುವಾಸೆ ನಮ್ಮ ಪ್ರೇಮ ವಸಂತದಲ್ಲಿ
ಅದ ನಾ ಬಾಯ್ಬಿಚ್ಚಿ ಹೇಳಿದಾಗ ನಾಚಿ ನಿಂತೆ ನೀ ಹೊಸ್ತಿಲಲ್ಲಿ
ಬರಸೆಳೆದು ಬಳಿ ಬಂದು ನಿಂತಾಗ ನಾ ಅದ್ಯಾವುದೋ ಭಯ ಕಣ್ಣಂಚಿನಲ್ಲಿ
ಮತ್ತೆ ಮುಗ್ಧ ಕೋಪ ಮೂಗಿನ ತುದಿಯಲ್ಲಿ
ಮಧುಮಾಸ ಚಂದ್ರಮನು ಅಂಗಳದಲಿ ಮುಕ್ಕಾಮು ಹೂಡಿರಲು
ಬಂದಳಾ ನೈದಿಲೆ ನನ್ನತ್ತ ಸಂಭ್ರಮದಲಿ
ನಿನ್ನೆ ನರ್ತಿಸುತ್ತಿದ್ದ ಮೂಗತುದಿ ಮುಗ್ಧ ಕೋಪ ಮೂಗಿನಿಂದ ಜಾರಿ ಕೆಂದುಟಿಗೆ
ಬಂದಿರಲು
ನೀಡಿದಳು ಒಳಗೆ ಆಮಂತ್ರಣವ ಬೆರಳಿನಿಂದ ಸೆರಗ ತುದಿ ತಿರುಗಿಸುತ್ತಲೇ ಕಾಯಿ ಮಾವು
ತಿಂದು ಬರಲು
ಹೊರಟೆ ನಾನೀಗ ಒಳಗೆ ಆ ಸೆರಗ ತೋರುವ ದಾರಿಯಲಿ
ಸದ್ಯ ಹುಳಿ ಮಾವು ಹಳಿ ತಪ್ಪಿಸದಿದ್ದರೆ ಸಾಕು.....!�
No comments:
Post a Comment